ವಿಜಯನಗರ Mega ಉದ್ಯೋಗ ಮೇಳ 2026: ಫೆಬ್ರವರಿ 21ರಂದು ಹೊಸಪೇಟೆಯಲ್ಲಿ 2000+ ಉದ್ಯೋಗ ಅವಕಾಶ | job alert

Telegram Group Join Now
WhatsApp Follow Join Now

ವಿಜಯನಗರ ಜಿಲ್ಲೆಯ ಯುವಕರಿಗೆ ಉತ್ತಮ ಉದ್ಯೋಗ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ 2026 ಆಯೋಜಿಸಲಾಗಿದೆ. ವಿವಿಧ ಖಾಸಗಿ ಕಂಪನಿಗಳು ಹಾಗೂ ಕೌಶಲ್ಯಾಭಿವೃದ್ಧಿ ಸಂಸ್ಥೆಗಳು ಭಾಗವಹಿಸುತ್ತಿದ್ದು, ಸಾವಿರಾರು ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆಯುವ ಅವಕಾಶ ಲಭ್ಯವಾಗಲಿದೆ.

Vijayanagar Mega Job Fair 2026:

Photo Credit: District Information Office, Vijayanagar

Vijayanagar Mega Job Fair 2026:ಅಧಿಕಾರಿಗಳ ಸಮ್ಮುಖದಲ್ಲಿ ಸಭೆ

ಕಾರ್ಯಕ್ರಮದ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ (DC) ಶ್ರೀಮತಿ ಕವಿತಾ ಎಸ್. ಮನ್ನಿಕೇರಿ ಅವರು ಅಧ್ಯಕ್ಷತೆ ವಹಿಸಿ, ಉದ್ಯೋಗ ಮೇಳವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅವರ ಮಾರ್ಗದರ್ಶನದಲ್ಲಿಯೂ ಸಭೆ ನಡೆಯಿತು.

ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯ ಪ್ರಮುಖ ಅಂಶಗಳು

ಈ ಸಂದರ್ಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ವಿ.ಎನ್.ಸಿ ಕಾಲೇಜ್ ಅಧ್ಯಕ್ಷರಾದ ಎನ್. ಮಲ್ಲಿಕಾರ್ಜುನ್, (ಹೊಸಪೇಟೆ) ವಿ.ಎನ್.ಸಿ ಕಾಲೇಜಿನ ಪ್ರಿನ್ಸಿಪಲ್ ಮಾಂತೇಶ್ ಎನ್. ಆರಾಧ್ಯ ಮಠ, ಹಾಗೂ ರೈಟ್ ವೇ ಸೊಲ್ಯೂಷನ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಮ್ಯಾಡಂ ಅವರು, ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ವಿಜಯನಗರ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳ ಯುವಕರಿಗೆ ಈ ಉದ್ಯೋಗ ಮೇಳವು ಸದುಪಯೋಗವಾಗಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಜೆಎಸ್‌ಡಬ್ಲ್ಯೂ, ಎಸ್‌ಎಲ್‌ಆರ್ ಹಾಗೂ ಬಾಲ್ದೋಟಾ ಸೇರಿದಂತೆ ಪ್ರಮುಖ ಖಾಸಗಿ ಕಂಪನಿಗಳಲ್ಲಿ ಮಹಿಳೆಯರಿಗೆ ಉಪಯುಕ್ತವಾಗುವ ಗಾರ್ಮೆಂಟ್ ಫ್ಯಾಕ್ಟರಿಗಳನ್ನು ಆರಂಭಿಸುವ ಕುರಿತು ಚರ್ಚೆಯೂ ನಡೆಯಿತು.

ಇದೇ ವೇಳೆ ಎಸ್‌ಎಲ್‌ಆರ್ ಫ್ಯಾಕ್ಟರಿಯ HR ಪ್ರತಿನಿಧಿಗಳು ಡಿಪ್ಲೊಮಾ ಮೆಟಲ್ ಕೋರ್ಸ್ ಆರಂಭಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸುರಕ್ಷತಾ (Safety) ಶಿಕ್ಷಣಕ್ಕೆ ಸಂಬಂಧಿಸಿದ ಕಾಲೇಜು ವಿಜಯನಗರದಲ್ಲಿ ಆರಂಭಿಸುವ ಬೇಡಿಕೆಯನ್ನೂ ಮುಂದಿಟ್ಟರು, ಏಕೆಂದರೆ ಈ ತರಹದ ಕೋರ್ಸ್‌ಗಳು ಬೆಂಗಳೂರಿನಂತಹ ನಗರಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಕಡಿಮೆ ಇದೆ ಎಂದು ಹೇಳಿದರು.

Vijayanagar Mega Job Fair 2026:ಯಾವ ಕಂಪನಿಗಳು ಭಾಗವಹಿಸುತ್ತಿವೆ?

ಈ ಉದ್ಯೋಗ ಮೇಳದಲ್ಲಿ ಜೆಎಸ್‌ಡಬ್ಲ್ಯೂ, ಕಿರ್ಲೋಸ್ಕರ್, ಜೆಎಸ್‌ಡಬ್ಲ್ಯೂ ಎನರ್ಜಿ, ಬಿಎಂಎಂ, ಬಾಲ್ದೋಟಾ, ಆರ್‌ಬಿಎಸ್‌ಎಸ್‌ಎನ್, ಕಲ್ಯಾಣಿ, ಹುಂಡೈ, ಮುನೀರ್ ವಿಜಯ್, ಸೇವ್ ಮೈಕ್ರೋ ಫೈನಾನ್ಸ್, ಎಲ್‌ಐಸಿ, ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ.

ಉದ್ಯೋಗ ಮೇಳದ ದಿನಾಂಕ, ಸಮಯ ಮತ್ತು ಸ್ಥಳ

ದಿನಾಂಕ: 21/02/2026
📍 ಸ್ಥಳ: ವಿಜಯನಗರ ಕಾಲೇಜ್, ಹೊಸಪೇಟೆ – 583201
⏰ ಸಮಯ: ಬೆಳಗ್ಗೆ 9.00 ರಿಂದ ಸಂಜೆ 5.00ರವರೆಗೆ

ಅರ್ಹತೆ ಮತ್ತು ಲಭ್ಯವಿರುವ ಉದ್ಯೋಗ ಅವಕಾಶಗಳು

ಈ ಉದ್ಯೋಗ ಮೇಳದಲ್ಲಿ SSLC, PUC, ITI, ಡಿಪ್ಲೊಮಾ, ನರ್ಸಿಂಗ್, ಎಂಜಿನಿಯರಿಂಗ್ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿದಾರರು ಭಾಗವಹಿಸಬಹುದು. 18 ರಿಂದ 35 ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ಅವಕಾಶವಿದ್ದು, 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ 2000ಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡಲಿವೆ.

Vijayanagar Mega Job Fair 2026:ನೋಂದಣಿ ಹೇಗೆ ಮಾಡಬೇಕು? ಮತ್ತು ಸೂಚನೆ

ಅಭ್ಯರ್ಥಿಗಳು ನೀಡಿರುವ QR ಕೋಡ್ ಮೂಲಕ ಅಥವಾ ಸಹಾಯವಾಣಿ ಸಂಖ್ಯೆಗಳ ಮೂಲಕ ಮುಂಚಿತವಾಗಿ ನೋಂದಣಿ ಮಾಡಬಹುದು. ನೋಂದಣಿ ಮಾಡಿದವರಿಗೆ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.

Vijayanagar Mega Job Fair 2026:ಸಹಾಯವಾಣಿ

Sikander9986779624
Vinodkumar79752778783
Kalavathi9538740865
Upendra9164408227

Vijayanagar Mega Job Fair 2026: ಕೊನೆ ಮಾತು

ವಿಜಯನಗರ ಜಿಲ್ಲೆಯಲ್ಲಿನ ಈ ಉದ್ಯೋಗ ಮೇಳವು ಕೇವಲ ಉದ್ಯೋಗ ನೀಡುವ ಕಾರ್ಯಕ್ರಮವಷ್ಟೇ ಅಲ್ಲದೆ, ಯುವಕರಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಮಾರ್ಗದರ್ಶನ ಒದಗಿಸುವ ಮಹತ್ವದ ವೇದಿಕೆಯಾಗಿದೆ. ಜಿಲ್ಲಾಡಳಿತವು ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳೊಂದಿಗೆ ಸಮನ್ವಯ ಸಾಧಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ತಕ್ಕ ಉದ್ಯೋಗವನ್ನು ನೀಡುವ ಪ್ರಯತ್ನ ಮಾಡುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಯುವಕರು ದೊಡ್ಡ ನಗರಗಳಿಗೆ ತೆರಳದೆ ತಮ್ಮ ಜಿಲ್ಲೆಯಲ್ಲೇ ಉತ್ತಮ ಉದ್ಯೋಗ ಪಡೆಯಲು ಈ ಮೇಳ ಸಹಾಯಕವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಮಹಿಳಾ ಸಬಲೀಕರಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಗಾರ್ಮೆಂಟ್ ಹಾಗೂ ಉತ್ಪಾದನಾ ಘಟಕಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆದಿರುವುದು ಗಮನಾರ್ಹವಾಗಿದೆ. ಇದರಿಂದ ಮಹಿಳೆಯರಿಗೆ ತಮ್ಮದೇ ಜಿಲ್ಲೆಯಲ್ಲೇ ಕೆಲಸ ಮಾಡುವ ಅವಕಾಶಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ಅಭ್ಯರ್ಥಿಗಳ ವಿದ್ಯಾರ್ಹತೆ, ಕೌಶಲ್ಯ ಹಾಗೂ ಅನುಭವದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಿದ್ದು, ಕೆಲವರಿಗೆ ತಕ್ಷಣವೇ ಆಫರ್ ಲೆಟರ್ ನೀಡುವ ಸಾಧ್ಯತೆಯೂ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಭ್ಯರ್ಥಿಗಳು ತಮ್ಮ ನವೀಕರಿಸಿದ ರೆಸ್ಯೂಮ್, ವಿದ್ಯಾರ್ಹತಾ ಪ್ರಮಾಣಪತ್ರಗಳು, ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಸೈಸ್ ಫೋಟೋಗಳನ್ನು ಕಡ್ಡಾಯವಾಗಿ ಕರೆತರುವಂತೆ ಸೂಚಿಸಲಾಗಿದೆ. ಕಾರ್ಯಕ್ರಮದ ದಿನ ಬೆಳಿಗ್ಗೆ ಬೇಗನೆ ನೋಂದಣಿ ಕೌಂಟರ್‌ನಲ್ಲಿ ಹಾಜರಾಗುವುದರಿಂದ ಸಂದರ್ಶನ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಬಹುದು. ಉದ್ಯೋಗ ಹುಡುಕುತ್ತಿರುವ ಹೊಸ ಪದವೀಧರರು, ತಾಂತ್ರಿಕ ಶಿಕ್ಷಣ ಪಡೆದವರು ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದ್ದು, ಭವಿಷ್ಯದ ಉದ್ಯೋಗ ಜೀವನಕ್ಕೆ ಹೊಸ ದಾರಿ ತೆರೆದುಕೊಳ್ಳಲಿದೆ.

ಜಿಲ್ಲಾಡಳಿತ ಹಾಗೂ ಭಾಗವಹಿಸುವ ಕಂಪನಿಗಳ ಸಹಯೋಗದಿಂದ ನಡೆಯುತ್ತಿರುವ ಈ ಮೆಗಾ ಉದ್ಯೋಗ ಮೇಳವು ವಿಜಯನಗರ ಜಿಲ್ಲೆಯ ಉದ್ಯೋಗ ಕ್ಷೇತ್ರದಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ನಿರೀಕ್ಷೆಯಿದೆ. ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

About The Author

Leave a Comment