Exam Should be like this
ಈಗಾಗಲೇ ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆ ಆದ ಅಭ್ಯರ್ಥಿಗಳಿಗೂ ಪದೇ ಪದೇ ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವುದರಿಂದ (ಕನಿಷ್ಠ 5 ವರ್ಷವರೆಗಾದರೂ) ವಿನಾಯಿತಿ ನೀಡಬೇಕು, ಇದುವರೆಗೆ ಯಾರು ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆಯಾಗಿಲ್ಲವೋ ಅಂತವರಿಗೆ ಮಾತ್ರ ಕಡ್ಡಾಯ ಕನ್ನಡ ಪರೀಕ್ಷೆ ನಡೆಸುವಂತಾಗಬೇಕು.!!
ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂಬುದನ್ನು OMR ಶೀಟ್ ನಲ್ಲಿಯೇ ಕಡ್ಡಾಯವಾಗಿ ಉಲ್ಲೇಖಿಸುವ ವ್ಯವಸ್ಥೆ ಜಾರಿಗೊಳಿಸಿದರೆ ಹಾಗೂ ಒಂದು ಪ್ರಶ್ನೆ ಪತ್ರಿಕೆಯಲ್ಲಿ 50% MCQ & 50% Descriptive Question ಕೇಳಿದರೆ ಸ್ವಲ್ಪ ಮಟ್ಟಿಗಾದರೂ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಬಹುದು.!!
ಪರೀಕ್ಷಾ ಶುಲ್ಕ ತುಂಬಾ ಹೆಚ್ಚಿದೆ ಅದು ಕಡಿಮೆಯಾಗಬೇಕು & UPSC ನಡೆಸುವ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದ ವಿನಾಯಿತಿ ಇದೆ.! ಇದೇ ವಿಧಾನವನ್ನು KPSC/KEA ಕೂಡಾ ಅಳವಡಿಸಿಕೊಳ್ಳಬಹುದಲ್ವಾ.?
ಒಂದೇ ದಿನ 2-3 ಪರೀಕ್ಷಾ ದಿನಾಂಕ ನಿಗದಿಯಾಗದಂತೆ ಮೊದಲೇ ಎಚ್ಚರವಹಿಸುವುದು.! ಪದೇ ಪದೇ ಪರೀಕ್ಷಾ ದಿನಾಂಕ ಬದಲಾವಣೆ ಮಾಡುವ ಕೆಟ್ಟ ಸಂಪ್ರದಾಯಕ್ಕೆ ಇತಿಶ್ರೀ ಹಾಡಬೇಕು.!!
ಸರಕಾರದ ವಿವಿಧ ಇಲಾಖೆಗಳ ಒಂದೇ ರೀತಿಯ ವಿದ್ಯಾರ್ಹತೆ, ಒಂದೇ ರೀತಿಯ Syllabus & ಒಂದೇ ವೃಂದದ (Group- B & C) ಹುದ್ದೆಗಳಿಗೆ ಪದೇ ಪದೇ ಪ್ರತ್ಯೇಕ ಪರೀಕ್ಷೆ ನಡೆಸುವ ಬದಲಿಗೆ ರಾಜ್ಯಾದ್ಯಂತ/ದೇಶಾದ್ಯಂತ ಒಂದೇ ಸಾಮಾನ್ಯ ಪರೀಕ್ಷೆಯನ್ನು ನಡೆಸುವುದು.!!
ಹೀಗೊಂದು ಚಿಂತನೆ ಏಕೆ ಮಾಡಬಾರದು.? ಪದೇ ಪದೇ ಅರ್ಜಿ ಸಲ್ಲಿಕೆ, ಪದೇ ಪದೇ ಪರೀಕ್ಷೆಗಳಿಂದ Valuable Time, Money, Manpower, Resource, Energy, etc….ಎಲ್ಲವೂ ಬಹಳಷ್ಟು ಖರ್ಚಾಗುತ್ತಿದೆ.!!