Sensodyne IDA Shining Star Scholarship Program 2024-25 ಸೆನ್ಸೊಡೈನ್ ಐಡಿಎ ಶೈನಿಂಗ್ ಸ್ಟಾರ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25

Sensodyne IDA Shining Star Scholarship Program 2024-25

ಸೆನ್ಸೊಡೈನ್‌ನ ತಯಾರಕರಾದ ಹೇಲಿಯಾನ್ ಇಂಡಿಯಾ,  ಭಾರತದಾದ್ಯಂತದ ಪ್ರತಿಭಾನ್ವಿತ ಮತ್ತು ಸೌಲಭ್ಯವಂಚಿತ ಬಿಡಿಎಸ್ ವಿದ್ಯಾರ್ಥಿಗಳನ್ನು ಬೆಂಬಲಿಸಲು ‘ಸೆನ್ಸೊಡೈನ್ ಐಡಿಎ ಶೈನಿಂಗ್ ಸ್ಟಾರ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25’ಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ವಿದ್ಯಾರ್ಥಿಗಳು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಕೊಟ್ಟಿದ್ದೇವೆ. ಈ ಲೇಖನದ ಕೊನೆಯವರೆಗೆ ಓದಿ

ಅರ್ಹತೆ :

  • ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಕಾಲೇಜುಗಳಿಂದ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) ನಲ್ಲಿ, ಮೊದಲ ವರ್ಷವನ್ನು ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
  • ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
  • ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು INR 8,00,000 ಮೀತಿಗೆ ಮೀರಿರಬಾರದು. 

ಪ್ಯಾನ್-ಇಂಡಿಯಾ ವಿದ್ಯಾರ್ಥಿಗಳು pan India ಸಹ ಅರ್ಜಿ ಸಲ್ಲಿಸಲು ಅರ್ಹರು.

ಈ ಕೆಳಗಿನ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

Haleon, IDA, Give India, ಮತ್ತು Buddy4Study ಉದ್ಯೋಗಿಗಳ ಮಕ್ಕಳು ಅಥವಾ ಕುಟುಂಬದ ಸದಸ್ಯರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಬೇಕಾಗುವ ದಾಖಲೆಗಳು

  • ಹಿಂದಿನ ತರಗತಿ/ಸೆಮಿಸ್ಟರ್‌ನ ಮಾರ್ಕ್‌ಶೀಟ್
  • ಸರ್ಕಾರ ನೀಡಿದ ಗುರುತಿನ ಚೀಟಿ (ಆಧಾರ್ ಕಾರ್ಡು/ವೋಟರ್ ಐಡಿ ಕಾರ್ಡ್/ಚಾಲನಾ ಪರವಾನಗಿ ಪತ್ರ/ಪ್ಯಾನ್ ಕಾರ್ಡ್ ಬೇಕು)
  • ಈಗಿನ ವರ್ಷದ ಪ್ರವೇಶ ಪಡೆದ -ಶುಲ್ಕ ರಸೀದಿ/-ಪ್ರವೇಶ ಪತ್ರ/-ಸಂಸ್ಥೆಯ ಗುರುತಿನ ಚೀಟಿ/ -ಬೋನಾಫೈಡ್ ಪ್ರಮಾಣಪತ್ರ ಸಲ್ಲಿಸತಕ್ಕದ್ದು.
  • ಕುಟುಂಬದ ಆದಾಯ ಪತ್ರ -ತೆರಿಗೆ ರಿಟರ್ನ್, ಸ್ಥಳೀಯ ಆಡಳಿತದಿಂದ ಆದಾಯ ಪ್ರಮಾಣಪತ್ರ, EWS ಪ್ರಮಾಣಪತ್ರದಂತಹ ಸರ್ಕಾರ-ನೀಡಿರುವ ದಾಖಲೆಗಳು ಇರಬೇಕು.
  • ಅರ್ಜಿದಾರರ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
  • ವಿದ್ಯಾರ್ಥಿಯ ಭಾವಚಿತ್ರ ( ಪಾಸ್ ಪೋರ್ಟ್ ಅಳತೆಯ ಭಾವಚಿತ್ರ)
ಗಮನಿಸಿ: ವಿದ್ಯಾರ್ಥಿಗಳು ಇಂದಿನ ಸೆಮಿಸ್ಟರ್ ನಲ್ಲಿ ಪಡೆದ ಮಾರ್ಕ್ಸ್ ಕಾರ್ಡ್ ಮತ್ತು ಕಾಲೇಜು ಪ್ರಾಂಶುಪಾಲರಿಂದ ಪಡೆದ ನಡತೆಯ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. 

ಈ ಸ್ಕಾಲರ್ಶಿಪ್ನ ಪ್ರಯೋಜನಗಳು

ವಿದ್ಯಾರ್ಥಿಗಳು 4 ವರ್ಷಗಳವರೆಗೆ ಪ್ರತಿವರ್ಷಕ್ಕೆ ರೂಪಾಯಿ 1,05,000 ಸಹಾಯಧನ ಪಡೆಯಲಿದ್ದಾರೆ.

ಗಮನಿಸಿ: ಅರ್ಜಿದಾರರ ಬೋಧನಾ ಫೀ, ಹಾಸ್ಟೆಲ್ ಫೀ, ಆಹಾರ, ಇಂಟರ್ನೆಟ್, ಮೊಬೈಲ್, ಲ್ಯಾಪ್‌ಟಾಪ್, ಪುಸ್ತಕಗಳು, ಲೇಖನ ಸಾಮಗ್ರಿಗಳು, ಆನ್‌ಲೈನ್ ಕಲಿಕೆ ಇತ್ಯಾದಿಗಳಂತಹ ಶೈಕ್ಷಣಿಕ ವೆಚ್ಚಗಳಿಗೆ ಮಾತ್ರ ಬಳಸತಕ್ಕದ್ದು.

Last Date to Apply:30-11-2024
Application mode:ಆನ್‌ಲೈನಲ್ಲಿ ಅರ್ಜಿ ಹಾಕಿ.
More Schemes Public Schemes click here

Leave a Comment