ಸ್ವಂತ ಮನೆ ಕಟ್ಟಲು ₹3.50 ಲಕ್ಷ ಸಹಾಯಧನ! ಅಂಬೇಡ್ಕರ್ ನಿವಾಸ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು: ಪ್ರತಿಯೊಬ್ಬ ಬಡವನಿಗೂ ತನ್ನದೇ ಆದ ಒಂದು ಸುಂದರ ಮನೆ ಕಟ್ಟಿಸಬೇಕು ಎಂಬ ದೊಡ್ಡ ಕನಸಿರುತ್ತದೆ. ಆ ಕನಸನ್ನು ನನಸು ಮಾಡಲು ಕರ್ನಾಟಕ ಸರ್ಕಾರವು ‘ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ’ (Ambedkar Niwas Yojana) ಯನ್ನು ಜಾರಿಗೆ ತಂದಿದೆ.
ನಿಮ್ಮ ಬಳಿ ಸ್ವಂತ ನಿವೇಶನವಿದ್ದು (Site), ಮನೆ ಕಟ್ಟಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಈ ಯೋಜನೆಯ ಮೂಲಕ ಸರ್ಕಾರವೇ ನಿಮಗೆ ಹಣಕಾಸಿನ ನೆರವು ನೀಡಲಿದೆ.
ಮುಖ್ಯಾಂಶಗಳು
- ಯೋಜನೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ
- ಗ್ರಾಮೀಣ ಪ್ರದೇಶದವರಿಗೆ:-1.75 ಲಕ್ಷದವರೆಗೆ
- ನಗರ ಪ್ರದೇಶದ ವರಿಗೆ 2 ಲಕ್ಷದಿಂದ 3,55,000 ವರೆಗೆ
- ಅರ್ಹತೆ: ಎಸ್ ಸಿ ಎಸ್ ಟಿ ಸಮುದಾಯದ ಬಡ ಕುಟುಂಬಗಳಿಗೆ ಕೊಡಲಾಗುವುದು
- ವೆಬ್ ಸೈಟ್: ashraya.karnataka.gov.in
ಸಬ್ಸಿಡಿ ಎಷ್ಟು ಸಿಗುತ್ತದೆ ಸಹಾಯಧನ ಎಷ್ಟು ಸಿಗಬಹುದು ನಿಮಗೆ,(subsidy details)

- ಸರ್ಕಾರವು ಫಲಾನುಭವಿಗಳಿಗೆ ಅವರ ಖಾತೆಗೆ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತದೆ
- ಗ್ರಾಮೀಣ ಪ್ರದೇಶದವರೆಗೆ: ಹಳ್ಳಿಗಳಲ್ಲಿ ವಾಸವಿರುವವರಿಗೆ 1.75000 (ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಗಳು ಸಿಗಲಿದೆ)
- ನಗರ ಪ್ರದೇಶದವರಿಗೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಸುತ್ತಿರುವರಿಗೆ ಎರಡು ಲಕ್ಷ ರೂಗಳು ಸಹಾಯಧನವಾಗಿ ಸಿಗುತ್ತದೆ
- ವಿಶೇಷ ಸೂಚನೆ: ನಗರ ಪ್ರದೇಶದವರು ಇದನ್ನು ಕೇಂದ್ರದ `ಪ್ರಧಾನಮಂತ್ರಿ ಅವಾಸ್ ಯೋಜನೆ’ ಜೊತೆ ಸಂಯೋಜಿಸಿದರೆ ಹೆಚ್ಚುವರಿ 150000/- ಸೇರಿ ಒಟ್ಟು 350,000,ವರೆಗೆ ಲಾಭ ಪಡೆಯಬಹುದಾಗಿದೆ
| ವಿವರ (Details) | ಮಾಹಿತಿ (Info) |
|---|---|
| ಗ್ರಾಮೀಣ ಸಹಾಯಧನ | ₹1,75,000 |
| ನಗರ ಸಹಾಯಧನ | ₹2,00,000 (Max ₹3.5L with PM Awas) |
| ಮೀಸಲಾತಿ | SC: 70% | ST: 30% |
ಯಾರೆಲ್ಲಾ ಈ ಅಪ್ಲಿಕೇಶನ್ ಹಾಕಬಹುದು(eligibility criteria)
ಈ ಯೋಜನೆಯ ಲಾಭ ಪಡೆಯಲು ಈ ಕೆಳಗಿನ ಅರ್ಹತೆಗಳು ಕಡ್ಡಾಯ:
ಅರ್ಜಿದಾರರು ಕಡ್ಡಾಯವಾಗಿ ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿರಬೇಕು.
ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
ಆದಾಯ ಮಿತಿ: ಗ್ರಾಮೀಣ ಪ್ರದೇಶದವರಿಗೆ ವಾರ್ಷಿಕ ಆದಾಯ ₹32,000 ಮತ್ತು ನಗರ ಪ್ರದೇಶದವರಿಗೆ ₹87,600 ಮೀರಬಾರದು.
ಅರ್ಜಿದಾರರ ಹೆಸರಿನಲ್ಲಿ ಸ್ವಂತ ನಿವೇಶನ (Site) ಅಥವಾ ಸರ್ಕಾರ ನೀಡಿರುವ ಹಕ್ಕುಪತ್ರ ಇರಬೇಕು.
ಈ ಹಿಂದೆ ಸರ್ಕಾರದ ಯಾವುದೇ ವಸತಿ ಯೋಜನೆಯ ಲಾಭ ಪಡೆದಿರಬಾರದು.
ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- ಬಿಪಿಎಲ್ (BPL) ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಸೈಟ್ ಹಕ್ಕು ಪತ್ರ ಅಥವಾ ಖಾತಾ ಪತ್ರ
- ಬ್ಯಾಂಕ್ ಪಾಸ್‌ಬುಕ್ ಪ್ರತಿ
ಅರ್ಜಿ ಸಲ್ಲಿಸುವುದು ಹೇಗೆ?
ನೀವು online ಮೂಲಕ ashraya.karnataka.gov.in ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ , ಅಥವಾ ನಿಮ್ಮ ಗ್ರಾಮ ಪಂಚಾಯಿತಿ ಪುರಸಭೆ ಮತ್ತು ನಗರಸಭೆ ಕಚೇರಿಗೆ ಹೋಗಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಬಹುದು ಫಲಾನುಭವಿಗಳು ಗ್ರಾಮ ಪಂಚಾಯಿತಿ ಸಭೆಯಲ್ಲಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ
ಈ ಯೋಜನೆ ಅಡಿಯಲ್ಲಿ ಹಣವನ್ನು ಹಂತ ಹಂತವಾಗಿ ನೀಡಲಾಗುತ್ತದೆ, ಪಾಯ ಕಟ್ಟಿದ ಮೇಲೆ ಗೋಡೆ ಛಾವಣಿ ಹಂತಕ್ಕೆ ತಕ್ಕಂತೆ ನಾಲ್ಕು ಕಂತುಗಳಲ್ಲಿ ಹಣ ಜಮಾ ಮಾಡಲಾಗುತ್ತದೆ ನಿಮ್ಮ ಖಾತೆಗೆ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ? Step-By-Step
ಅಂಬೇಡ್ಕರ್ ನಿವಾಸ ಯೋಜನೆ: ಆನ್‌ಲೈನ್ ಅರ್ಜಿ ಸಲ್ಲಿಸುವ 5 ಸರಳ ಹಂತಗಳು
- ಹಂತ 1 (ಭೇಟಿ ನೀಡಿ): ashraya.karnataka.gov.in ವೆಬ್‌ಸೈಟ್‌ಗೆ ಹೋಗಿ “Online Application” ಮೇಲೆ ಕ್ಲಿಕ್ ಮಾಡಿ.
- ಹಂತ 2 (ನೋಂದಣಿ): ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, OTP ಮೂಲಕ ಲಾಗಿನ್ ಆಗಿ.
- ಹಂತ 3 (ವಿವರ ಭರ್ತಿ): ನಿಮ್ಮ ಹೆಸರು, ಆಧಾರ್ ಸಂಖ್ಯೆ ಮತ್ತು ಜಾತಿ/ಆದಾಯ ಪ್ರಮಾಣ ಪತ್ರದ RD ಸಂಖ್ಯೆಯನ್ನು ನಮೂದಿಸಿ.
- ಹಂತ 4 (ದಾಖಲೆ ಅಪ್‌ಲೋಡ್): ನಿಮ್ಮ ನಿವೇಶನದ (Site) ಹಕ್ಕುಪತ್ರ, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಅಪ್‌ಲೋಡ್ ಮಾಡಿ.
- ಹಂತ 5 (ಸಲ್ಲಿಕೆ): ಎಲ್ಲವನ್ನೂ ಪರಿಶೀಲಿಸಿ ‘Submit’ ಬಟನ್ ಒತ್ತಿ, ಅರ್ಜಿ ಸಂಖ್ಯೆಯನ್ನು (Acknowledgement Number) ಸೇವ್ ಮಾಡಿಕೊಳ್ಳಿ.
ತ್ವರಿತ ಸಲಹೆ: ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್‌ಗೆ ಫೋನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
- ಅಂಬೇಡ್ಕರ್ ನಿವಾಸ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಈ ಯೋಜನೆಯು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಕುಟುಂಬಗಳಿಗೆ ಮಾತ್ರ ಮೀಸಲಾಗಿದೆ. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು ಸ್ವಂತ ಸೂರು ಹೊಂದಿರಬಾರದು.
- ಈ ಯೋಜನೆಯಡಿ ಮನೆ ಕಟ್ಟಲು ಎಷ್ಟು ಹಣ ಸಿಗುತ್ತದೆ?
ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ₹1.75 ಲಕ್ಷ ಮತ್ತು ನಗರ ಪ್ರದೇಶದ ಫಲಾನುಭವಿಗಳಿಗೆ ₹2.00 ಲಕ್ಷ ಸಹಾಯಧನ ಸಿಗುತ್ತದೆ. ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜೊತೆಗೂಡಿಸಿದರೆ ಇನ್ನೂ ಹೆಚ್ಚಿನ ಹಣ ಸಿಗುವ ಸಾಧ್ಯತೆ ಇರುತ್ತದೆ.
- ಅರ್ಜಿ ಸಲ್ಲಿಸಲು ವಾರ್ಷಿಕ ಆದಾಯ ಮಿತಿ ಎಷ್ಟಿರಬೇಕು? ಗ್
ರಾಮೀಣ ಪ್ರದೇಶದ ಅರ್ಜಿದಾರರ ವಾರ್ಷಿಕ ಆದಾಯ ₹32,000 ಕ್ಕಿಂತ ಕಡಿಮೆ ಇರಬೇಕು. ನಗರ ಪ್ರದೇಶದವರಾದರೆ ವಾರ್ಷಿಕ ಆದಾಯ ₹87,600 ಕ್ಕಿಂತ ಕಡಿಮೆ ಇರಬೇಕು.
- ನನ್ನ ಬಳಿ ಸ್ವಂತ ಸೈಟ್ ಇಲ್ಲ, ನಾನು ಅರ್ಜಿ ಹಾಕಬಹುದೇ?
ಇಲ್ಲ, ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹೆಸರಿನಲ್ಲಿ ಸ್ವಂತ ನಿವೇಶನ (Site) ಅಥವಾ ಸರ್ಕಾರ ನೀಡಿದ ಹಕ್ಕುಪತ್ರ (Hakku Patra) ಕಡ್ಡಾಯವಾಗಿ ಇರಬೇಕು. ನಿವೇಶನ ಇಲ್ಲದವರಿಗೆ ಸರ್ಕಾರವೇ ನಿವೇಶನ ನೀಡುವ ಬೇರೆ ಯೋಜನೆಗಳಿವೆ.
- ಅರ್ಜಿ ಎಲ್ಲಿ ಸಲ್ಲಿಸಬೇಕು?
ನೀವು ರಾಜೀವ್ ಗಾಂಧಿ ವಸತಿ ನಿಗಮದ ವೆಬ್‌ಸೈಟ್ (ashraya.karnataka.gov.in) ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಗ್ರಾಮ ಪಂಚಾಯಿತಿ, ಪುರಸಭೆ ಅಥವಾ ನಗರಸಭೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
| What’s app | Click here |
| Telegram | Click here |
| More information | Click here |