ಬೆಂಗಳೂರು : ನೀವು ಅಡಿಗೆ ಅನಿಲ ಬಳಸುತ್ತಿದ್ದೀರಾ ಹಾಗಿದ್ದರೆ ಈ ಕೂಡಲೇ ಎಚ್ಚೆತ್ತುಕೊಳ್ಳಿ ಕೇಂದ್ರ ಸರ್ಕಾರವು ಈ ಕೆವೈಸಿ ಮಾಡಲು ಅಂತಿಮ ಡೇಟ್ ಅನ್ನು ನಿಗದಿಪಡಿಸಿದೆ ಈ ನಿಗದಿತ ಸಮಯದಲ್ಲಿ ಈ ಕೆವೈಸಿ ಕಂಪ್ಲೀಟ್ ಮಾಡಿಕೊಳ್ಳಿ ಸರ್ಕಾರದ ಸಬ್ಸಿಡಿ ಹಣವನ್ನು ಪಡೆದುಕೊಳ್ಳಿ ನೀವು ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಹಣ ಬರುವುದಿಲ್ಲ,.

BIG NEW:LPG central government:ಜನವರಿ 31ರ ಒಳಗಡೆ ಈ ಕೆಲಸ ಮಾಡದಿದ್ದರೆ ನಿಮ್ಮ ಗ್ಯಾಸ್ ಸಬ್ಸಿಡಿ ಕಟ್ಟಾಗುವ ಚಾನ್ಸ್ ಇರುತ್ತದೆ??!!
ಏನಿದು ಈ ತರ ಹೇಳ್ತಾ ಇದ್ದಾರೆ ಇದರ ನಿಯಮ ಏನು ತಿಳಿಯೋಣ ಬನ್ನಿ :
ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿಯೊಬ್ಬ ಗ್ಯಾಸ್ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಈ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಗಡವನ್ನು ಈಗ ಜನವರಿ 31 2026 ರವರೆಗೆ ಸಮಯ ವಿಸ್ತರಿಸಲಾಗಿದೆ ಅಕ್ರಮ ತಡೆಗಳನ್ನು ಮತ್ತು ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಸಿಗಲಿ ಅವರ ಕೈಗೆ ತಲುಪಲಿ ಅಂತ ಹೇಳಿ ಈ ಕ್ರಮವನ್ನು ಕೈಗೊಳ್ಳಲಾಗಿದೆ
ಈ ನಿಯಮ ಯಾರಿಗೆ ಅನ್ವಯಿಸುತ್ತದೆ ನೋಡೋಣ ಬನ್ನಿ :
ಪ್ರಧಾನ ಮಂತ್ರಿ ಉಜ್ವಲ ಯೋಜನೆ : ಈ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಪಡೆದವರು ಕಡ್ಡಾಯವಾಗಿ ಇ- ಕೆವೈಸಿ ಮಾಡಿಸಲೇಬೇಕು,
ಸಾಮಾನ್ಯ ಗ್ರಹಕರು : ಯಾರೆಲ್ಲ ಸಾಮಾನ್ಯ ಗ್ರಾಹಕರು ಸಬ್ಸಿಡಿ ಪಡಿತಾ ಇದಿರಲ್ವಾ ಅವರು ಸಹ ಇದು ಅನ್ವಯಿಸುತ್ತದೆ
ರಾಜ್ಯ ಯೋಜನೆ : ತೆಲಂಗಾಣ ದಂತಹ ರಾಜ್ಯಗಳಲ್ಲಿ ನೀಡಲಾಗಿರುವ 500 ಗ್ಯಾಸ್ ಸಬ್ಸಿಡಿ ಅವರಿಗೂ ಇದು ಅನಿವಾರ್ಯವಾಗಿರುತ್ತದೆ
E- ಕೆವೈಸಿ ಪೂರ್ಣಗೊಳಿಸುವುದು ಹೇಗೆ ಸಂಪೂರ್ಣ ಮಾಹಿತಿ ಹಂತ ಹಂತವಾಗಿ :
ನಾವು ಕೊಟ್ಟಂತಹ ಈ ಕೆಳಗಿನ ಯಾವುದೇ ಒಂದು ವಿಧಾನದ ಮೂಲಕ ನೀವು ಈ ಕೆವೈಸಿಯನ್ನು ಪೂರ್ಣಗೊಳಿಸಬಹುದು
ಗ್ಯಾಸ್ ವಿತರಣಾ ಸಿಬ್ಬಂದಿ ಮೂಲಕ :
ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸಲು ಬರುವ ಡೆಲಿವರಿ ಬಾಯ್ ಬಳಿ ಇರುವ ಬಯೋಮೆಟ್ರಿಕ್ ಯಂತ್ರದ ಮೂಲಕ ಹೆಬ್ಬೆಟ್ಟಿನ ಗುರುತು ನೀಡಿ ಇ- ಕೆವೈಸಿ ಮಾಡಿಸಬಹುದು
ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ : ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಕನೆಕ್ಷನ್ ಬುಕ್ ತೆಗೆದುಕೊಂಡು ಹೋಗಿ ಅಲ್ಲಿ ಬಯೋಮೆಟ್ರಿಕ್ ಇಂದ ಅಪ್ಡೇಟ್ ಮಾಡಿಸಬಹುದು.
ಆನ್ಲೈನ್ ಮೂಲಕ ಸಹ ಮಾಡಿಸಬಹುದು: ಇಂಡಿಯನ್, ಎಚ್ ಪಿ,ಭಾರತ್ ಗ್ಯಾಸ್, ಕಂಪನಿಗಳ ಅಧಿಕೃತ ಮೊಬೈಲ್ ಹ್ಯಾಪ್ ಗಳ ಮೂಲಕ ಮತ್ತು ವೆಬ್ ಸೈಟ್ ಮೂಲಕ ಮಾಡಿಸಿಕೊಳ್ಳಬಹುದು ಅಥವಾ ಮಾಡಿಕೊಳ್ಳಬಹುದು.
ದೂರವಾಣಿ ಸಂಖ್ಯೆ : ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್. Www.pmuy.gov.in/e-kyc.html ಗೆ ಭೇಟಿ ನೀಡಿ ಅಥವಾ ಟೋಲ್ ಫ್ರೀ ನಂಬರ್ 18002333555 ಈ ನಂಬರಿಗೆ ಕರೆ ಮಾಡಿ ಸಹ ಮಾಡಿಸಬಹುದು
ಮುಖ್ಯ ವಿವರಗಳ ಪಟ್ಟಿ
| ವಿವರಗಳು | ಮಾಹಿತಿ |
| ಕೊನೆಯ ದಿನಾಂಕ | ಜನವರಿ 31, 2026 |
| ಅಗತ್ಯ ದಾಖಲೆ | ಆಧಾರ್ ಕಾರ್ಡ್ ಮತ್ತು ಗ್ಯಾಸ್ ಕನೆಕ್ಷನ್ ಬುಕ್ |
| ಸಹಾಯವಾಣಿ ಸಂಖ್ಯೆ | 18002333555 |
| ಅಧಿಕೃತ ವೆಬ್ಸೈಟ್ | www.pmuy.gov.in |
ನೆನಪಿಡುವ ವಿಷಯ : ಜನವರಿ 31ರ ಒಳಗೆ ಈ ಕೆಲಸ ಮುಗಿಸದಿದ್ದರೆ ಸರ್ಕಾರದಿಂದ ಬರುವ ಸಬ್ಸಿಡಿ ಹಣ ನಿಮಗೆ ದೊರಕುವುದಿಲ್ಲ, ಇದು ಪ್ರಧಾನಮಂತ್ರಿ ಉಜ್ವಲ ಯೋಜನೆ ಗ್ರಾಹಕರಿಗೆ ಮಾತ್ರವಲ್ಲ ಎಲ್ಲಾ ಗ್ರಾಹಕರಿಗೆ ಈ ನಿಯಮ ಅನ್ವಯಿಸುತ್ತದೆ.
ಕೆವೈಸಿ ಮಾಡಿಸದಿದ್ದರೆ ಏನಾಗಬಹುದು?
ಒಂದು ವೇಳೆ ನೀವೇನಾದ್ರೂ ಜನವರಿ 31ರೊಳಗೆ ಈ ಕೆವೈಸಿ ಮಾಡಿಸದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗುವ ಸಬ್ಸಿಡಿ ಹಣ ತ್ವರಿತವಾಗಿ ನಿಂತು ಹೋಗುತ್ತದೆ, ಅಲ್ಲದೆ ನಿಮ್ಮ ಗ್ಯಾಸ್ ಸಂಪರ್ಕವನ್ನು ಅಮಾನತು ಮಾಡಲಾಗುತ್ತದೆ, ಸಾಧ್ಯತೆ ಇರುತ್ತದೆ. ಆದುದರಿಂದ ಕೊನೆಯ ಕ್ಷಣದವರೆಗೆ ಬಿಡಬೇಡಿ ಆ ಆತುರತೆಯನ್ನು ತಪ್ಪಿಸಲು ಇಂದೇ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ
ನನ್ನೆಲ್ಲಾ ಓದುಗರಿಗೆ ನನ್ನ ಸಲಹೆ :
ಗ್ಯಾಸ್ ಏಜೆನ್ಸಿಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತುಂಬಾ ಜನರು ಇರುತ್ತಾರೆ, ಆದದರಿಂದ ಸಂಜೆ ನಾಲ್ಕು ಗಂಟೆಯ ನಂತರ ಹೋದರೆ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ನಿಮಗೆ ಬರುವುದಿಲ್ಲ ಅಥವಾ ನಿಮ್ಮ ಮನೆಗೆ ಸಿಲಿಂಡರ್ ನೀಡಲು ಬರುವ ವ್ಯಕ್ತಿಯ ಬಳಿ ಈ ವ್ಯವಸ್ಥೆ ಮಾಡಿಸಬಹುದು ಇದು ಅತ್ಯಂತ ಸರಳವಾದ ದಾರಿಯಾಗಿರುತ್ತದೆ ಒಂದು ರೂಪಾಯಿ ಕೂಡ ಯಾರಿಗೂ ಕೊಡುವ ಹಾಗಿಲ್ಲ ಯಾರಿಗೂ ಕೇಳುವ ಹಾಗಿಲ್ಲ ಇದು ಉಚಿತವಾದ ಒಂದು ಪ್ರಕ್ರಿಯೆ ಆಗಿರುತ್ತದೆ,.
ನನ್ನೆಲ್ಲಾ ಓದುಗರಿಗೆ ನನ್ನ ಸಲಹೆ :
ಗ್ಯಾಸ್ ಏಜೆನ್ಸಿಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತುಂಬಾ ಜನರು ಇರುತ್ತಾರೆ, ಆದದರಿಂದ ಸಂಜೆ ನಾಲ್ಕು ಗಂಟೆಯ ನಂತರ ಹೋದರೆ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ನಿಮಗೆ ಬರುವುದಿಲ್ಲ ಅಥವಾ ನಿಮ್ಮ ಮನೆಗೆ ಸಿಲಿಂಡರ್ ನೀಡಲು ಬರುವ ವ್ಯಕ್ತಿಯ ಬಳಿ ಈ ವ್ಯವಸ್ಥೆ ಮಾಡಿಸಬಹುದು ಇದು ಅತ್ಯಂತ ಸರಳವಾದ ದಾರಿಯಾಗಿರುತ್ತದೆ ಒಂದು ರೂಪಾಯಿ ಕೂಡ ಯಾರಿಗೂ ಕೊಡುವ ಹಾಗಿಲ್ಲ ಯಾರಿಗೂ ಕೇಳುವ ಹಾಗಿಲ್ಲ ಇದು ಉಚಿತವಾದ ಒಂದು ಪ್ರಕ್ರಿಯೆ ಆಗಿರುತ್ತದೆ,.