ನಮಸ್ಕಾರ ಸ್ನೇಹಿತರೆ ಪಬ್ಲಿಕ್ ಸ್ಕೀಮ್ಸ್ ಡಾಟ್ ಕಾಮ್ ವೆಬ್ ಸೈಟ್ ( Public Schemes .Com ) ಗೆ ಸ್ವಾಗತ, ಈ ದಿನ ನಾವು ಹೊಸ ರೇಷನ್ ಕಾರ್ಡ್ ಸ್ಟೇಟಸ್ ಅನ್ನ ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ಒಳಗೊಂಡಿದೆ.
Ration card status Karnataka
ಕರ್ನಾಟಕ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೆ ಬಾರಿ ಡಿಮ್ಯಾಂಡ್ ಇದೆ. ಈಗಾಗಲೇ ಕರ್ನಾಟಕ ರಾಜ್ಯದ ಅನೇಕ ಜನರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಹೊಸ ರೇಷನ್ ಕಾರ್ಡನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ಯಾರ್ಯಾರು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದರು ಅವರು ತಮ್ಮ ರೇಷನ್ ಕಾರ್ಡಿನ ಸ್ಥಿತಿಯನ್ನು ತಿಳಿದುಕೊಳ್ಳುವುದು ಒಳ್ಳೆಯದು. ಈಗಾಗಲೇ ನೀವೇನಾದರೂ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನ ಸಲ್ಲಿಸಿದವರು ಅದರ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಚೆಕ್ ಮಾಡುವುದು ಹೇಗೆ ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ನೀಡಲಾಗಿದೆ.
ಈಗಾಗಲೇ ಹೊಸ ರೇಷನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದವರು ಇನ್ನೇನು ಕೆಲವೇ ದಿನಗಳಲ್ಲಿ ನಿಮಗೆ ಹೊಸ ರೇಷನ್ ಕಾರ್ಡ್ ದೊರೆಯಲಿದ್ದು, ಹೊಸ ರೇಷನ್ ಕಾರ್ಡ್ ವಿತರಿಸುವಂತೆ ಮೇಲಿನ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಹೊಸ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವುದು ಹೇಗೆ?
ನಿಮ್ಮ ಹೆಸರನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.
ಹಂತ1: ಕೆಳಗೆ ನೀಡಲಾಗಿರುವ ನೇರ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಲಾನುಭವಿಗಳ ಪಟ್ಟಿಯಲ್ಲಿರುವ ಹೆಸರನ್ನು ಚೆಕ್ ಮಾಡಬಹುದು
https://ahara.karnataka.gov.in

ಹಂತ2: ನಂತರ ಮುಖಪುಟದ ಬಲ ಭಾಗದಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗಡೆ ಈ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ನಂತರ New/ Existing Rc Request Status ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

ಹಂತ3: ಇದಾದಮೇಲೆ ನಿಮ್ಮ ಜಿಲ್ಲೆಯ ಹೆಸರನ್ನು ನೀವು ಆಯ್ಕೆಯನ್ನು ಮಾಡಿ.
ಹಂತ4: ಹೊಸ ಪಡಿತರ ಚೀಟಿ ಸಲ್ಲಿಸಲಾದ ಅರ್ಜಿಯ ಸ್ಥಿತಿ ಮೇಲೆ ನೀವು ಕ್ಲಿಕ್ ಮಾಡಿ
ಹಂತ5: ನೀವು ಪಟ್ಟಣ ನಿವಾಸಿ ಆಗಿದ್ದಲ್ಲಿ Urban IRA ಸೆಲೆಕ್ಟ್ ಮಾಡಿ or ಅಥವಾ ನೀವು ಹಳ್ಳಿ ಆಗಿದ್ರೆ Rural ಸೆಲೆಕ್ಟ್ ಮಾಡಿ ನಂತರ ನಿಮ್ಮ ತಾಲೂಕು ಗ್ರಾಮ ಪಂಚಾಯಿತಿ ಮತ್ತು ಊರು ಸೆಲೆಕ್ಟ್ ಮಾಡಿ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಸಂಖ್ಯೆ ಹಾಕಿ Go ಮೇಲೆ ಕ್ಲಿಕ್ ಮಾಡಿ , ಇಲ್ಲಿ ನಿಮ್ಮ ಹೊಸ ರೇಷನ್ ಕಾರ್ಡಿನ ಅರ್ಜಿಯ ಸ್ಥಿತಿ ಕಾಣಿಸುತ್ತದೆ.
Ration Card ಉಪಯೋಗಗಳು:
ಕರ್ನಾಟಕ ರಾಜ್ಯದಲ್ಲಿ ಯಾವುದೇ ಯೋಜನೆಗಳ ಫಲವನ್ನು ಪಡೆದುಕೊಳ್ಳಲು ಅಥವಾ ಆಸ್ಪತ್ರೆ , ಅನೇಕ ಕಚೇರಿಗಳಲ್ಲಿ ಈ ಹೊಸ ರೇಷನ್ ಕಾರ್ಡ್ ಬಹಳ ಉಪಯೋಗಕ್ಕೆ ಬರುತ್ತದೆ.