
ಮಹಿಳೆಯರ ಉದ್ಯಮ ಅಭಿವೃದ್ಧಿಗೆ SBI ಸ್ತ್ರೀ ಶಕ್ತಿ ಸಾಲ ಯೋಜನೆ – ₹25 ಲಕ್ಷದವರೆಗೆ ಲೋನ್ ಅವಕಾಶ
Credit: Image Source: SBI / Representative Image
ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮಹಿಳಾ ಸಬಲೀಕರಣಕ್ಕೆ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದು, “ಸ್ತ್ರೀ ಶಕ್ತಿ ಪ್ಯಾಕೇಜ್” ಎಂಬ ವಿಶೇಷ ಸಾಲ ಯೋಜನೆಯನ್ನು ಜನರಿಗೆ ಪರಿಚಯಿಸಿದೆ. ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಸ್ವಂತ ಉದ್ಯಮ ಆರಂಭಿಸಲು ಅಥವಾ ಈಗಿರುವ ಬಿಸಿನೆಸ್ ವಿಸ್ತರಿಸಲು ಸುಲಭವಾಗಿ ಹಣಕಾಸು ನೆರವು ಪಡೆಯಬಹುದು. ಕಡಿಮೆ ಬಡ್ಡಿದರ, ಕಡಿಮೆ ಷರತ್ತುಗಳು ಹಾಗೂ ಶ್ಯೂರಿಟಿ ಇಲ್ಲದ ಸೌಲಭ್ಯಗಳು ಈ ಯೋಜನೆಯ ಪ್ರಮುಖ ಆಕರ್ಷಣೆಗಳಾಗಿವೆ. ಮಿಸ್ ಮಾಡದೆ ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಿ
ಏನಿದು ಸ್ತ್ರೀ ಶಕ್ತಿ ಪ್ಯಾಕೇಜ್? ಏನೆಲ್ಲಾ ಇರುತ್ತದೆ!
SBI ಬ್ಯಾಂಕ್ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ರೂಪಿಸಿರುವ ಈ ವಿಶೇಷ ಯೋಜನೆ ಏನೆಂದರೆ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. ದಿನಸಿ ಅಂಗಡಿ, ಬಟ್ಟೆ ವ್ಯಾಪಾರ, ಹೋಮ್ ಇಂಡಸ್ಟ್ರಿ, ಕೃಷಿ ಸಂಬಂಧಿತ ವ್ಯವಹಾರ ಅಥವಾ ಹೊಸ ಸ್ಟಾರ್ಟ್ಅಪ್ ಶುರು ಮಾಡಲು ಬಯಸುವ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಿದೆ. ಕಡಿಮೆ ಪ್ರಕ್ರಿಯೆ ಹಾಗೂ ಸುಲಭ ಸಾಲ ಅನುಮೋದನೆ ಈ ಯೋಜನೆಯ ವಿಶೇಷತೆ.
ಪ್ರಮುಖ ಹೈಲೈಟ್ಸ್ (Highlights)
- ಸಾಲದ ಮೊತ್ತ: ಕನಿಷ್ಠ ₹50,000 ರಿಂದ ಗರಿಷ್ಠ ₹25 ಲಕ್ಷದವರೆಗೆ
- ಬಡ್ಡಿದರ ರಿಯಾಯಿತಿ: ₹2 ಲಕ್ಷಕ್ಕಿಂತ ಹೆಚ್ಚು ಸಾಲಕ್ಕೆ 0.50% ಕಡಿಮೆ ಬಡ್ಡಿ
- ಶ್ಯೂರಿಟಿ ಬೇಡ: ₹5 ಲಕ್ಷದವರೆಗೆ
- ಮಹಿಳಾ ಉದ್ಯಮಿಗಳಿಗೆ ವಿಶೇಷ ಬೆಂಬಲ: ಹೊಸ ಬಿಸಿನೆಸ್ ಆರಂಭಿಸಲು ಉತ್ತೇಜನ
ಯೋಜನೆಯ ಮುಖ್ಯ ಲಾಭಗಳು ಏನು?
ಸ್ತ್ರೀ ಶಕ್ತಿ ಸಾಲದ ಮೂಲಕ ಮಹಿಳೆಯರು ಸ್ವಾವಲಂಬಿಯಾಗಲು ನೆರವಾಗುತ್ತದೆ. ಬ್ಯಾಂಕ್ನಿಂದ ಸುಲಭವಾಗಿ ಹಣ ಸಿಗುವುದರಿಂದ ಸಣ್ಣ ಮಟ್ಟದ ವ್ಯವಹಾರವನ್ನು ದೊಡ್ಡ ಮಟಕ್ಕೆ ಬೆಳೆಸುವ ಅವಕಾಶ ಸಿಗುತ್ತದೆ. ವಿಶೇಷವಾಗಿ ಗ್ರಾಮೀಣ ಮತ್ತು ಸಣ್ಣ ನಗರಗಳ ಮಹಿಳೆಯರಿಗೆ ಇದು ಆರ್ಥಿಕವಾಗಿ ಬಲ ನೀಡುವ ಯೋಜನೆ ಇದಾಗಿದೆ
ಯಾರು ಅರ್ಜಿ ಹಾಕಬಹುದು?
ತಮ್ಮ ಹೆಸರಿನಲ್ಲಿ ಬಿಸಿನೆಸ್ ನಡೆಸುವ ಮಹಿಳೆಯರು
ಹೊಸ ಉದ್ಯಮ ಆರಂಭಿಸಲು ಯೋಜನೆ ಮಾಡಿರುವವರು
ಸಣ್ಣ ಕೈಗಾರಿಕೆ, ರಿಟೇಲ್, ಸೇವಾ ಕ್ಷೇತ್ರ ಅಥವಾ ಕೃಷಿ ಸಂಬಂಧಿತ ವ್ಯವಹಾರ ಮಾಡುವವರು
ಹೇಗೆ ಅರ್ಜಿ ಹಾಕಬೇಕು?
- ಸಮೀಪದ SBI ಬ್ಯಾಂಕ್ ಶಾಖೆಗೆ ಭೇಟಿ ನೀಡಿ
- ಸ್ತ್ರೀ ಶಕ್ತಿ ಸಾಲದ ಅರ್ಜಿ ಫಾರ್ಮ್ ಭರ್ತಿ ಮಾಡಿ
- ಅಗತ್ಯ ದಾಖಲೆಗಳು (ಆಧಾರ್, PAN, ಬಿಸಿನೆಸ್ ವಿವರಗಳು) ಸಲ್ಲಿಸಬೇಕು
- ಬ್ಯಾಂಕ್ ಪರಿಶೀಲನೆಯ ನಂತರ ಸಾಲ ಮಂಜೂರು ಮಾಡಲಾಗುತ್ತದೆ
ಕೊನೆಯ ಮಾತು
ಮಹಿಳೆಯರು ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಬೆಳೆಯಲು ಇಚ್ಚಿಸಿದರೆ SBI ಸ್ತ್ರೀ ಶಕ್ತಿ ಪ್ಯಾಕೇಜ್ ಉತ್ತಮ ಅವಕಾಶ ಒದಗಿಸಿಕೊಡುತ್ತದೆ ಕಡಿಮೆ ಬಡ್ಡಿದರ, ಶ್ಯೂರಿಟಿ ಇಲ್ಲದ ಸೌಲಭ್ಯ ಹಾಗೂ ದೊಡ್ಡ ಮೊತ್ತದ ಸಾಲ – ಈ ಎಲ್ಲಾ ಅಂಶಗಳು ಮಹಿಳಾ ಉದ್ಯಮಿಗಳಿಗೆ ದೊಡ್ಡ ಅನುಕೂಲಕರವಾಗಿರುತ್ತದೆ,.