ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವ ಪದವೀಧರರಿಗೆ ಗುಡ್ ನ್ಯೂಸ್…!

ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವ ಪದವೀಧರರಿಗೆ ಗುಡ್ ನ್ಯೂಸ್…! 300 KAS ಹುದ್ದೆಗಳಿಗೆ KPSC ವತಿಯಿಂದ ಅರ್ಜಿ ಆಹ್ವಾನ ಈಗಲೇ ಅರ್ಜಿ ಸಲ್ಲಿಸಿ

KPSC ಯಿಂದ 300 ಕೆಎಎಸ್ ಹುದ್ದೆಗಳ ಶೀಘ್ರದಲ್ಲಿ ನೇಮಕಾತಿ: ರಾಜ್ಯ ಸರ್ಕಾರದಿಂದ KPSC ನೇಮಕಾತಿ ಪ್ರಕ್ರಿಯೇ ಆರಂಭ- ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.

ಕರ್ನಾಟಕ ಲೋಕಸೇವಾ ಆಯೋಗದಿಂದ ಮತ್ತೊಂದು ಬೃಹತ್ ನೇಮಕಾತಿ ಅಧಿಸೂಚನೆ ಶೀಘ್ರದಲ್ಲಿಯೇ ಹೊರಬಿಳಲಿದ್ದು, ಕರ್ನಾಟಕ ಸರ್ಕಾರದಲ್ಲಿ ಖಾಲಿ ಇರುವ ವಿವಿಧ ಇಲಾಖೆಗಳಲ್ಲಿನ ಕೆಎಎಸ್ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. 300 ಕೆಎಎಸ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರವು ಆಸಕ್ತಿಯನ್ನು ತೋರಿಸಿದ್ದು, ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆದು ನಂತರ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗುವುದು. ಶೀಘ್ರದಲ್ಲಿಯೇ ಕೆಪಿಎಸ್ಸಿಯಿಂದ ಅಧಿಸೂಚನೆ ಕೂಡ ಹೊರಬೀಳಲಿದ್ದು, ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಈಗಿನಿಂದಲೇ ಪರೀಕ್ಷೆಗಾಗಿ ಸಕಲ ಸಿದ್ದತೆಗಳನ್ನೂ ನಡೆಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಬಹುದಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದಿಂದ (KPSC )ನಡೆಯುವ ಕೆಎಎಸ್ ಹುದ್ದೆಗಳ ನೇಮಕಾತಿ, ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಈ ಕೆಳಗೆ ಸಂಪೂರ್ಣವಾಗಿ ಚರ್ಚಿಸಲಾಗಿದೆ.

ಹುದ್ದೆಗಳ ವಿವರ/ Post Details:

ಹುದ್ದೆಗಳ ಹೆಸರು: ಕೆಎಎಸ್ ಗ್ರೂಪ್ ಎ & ಬಿ

ಹುದ್ದೆಗಳ ಸಂಖ್ಯೆ: 300 ಹುದ್ದೆಗಳು

ಆಯ್ಕೆ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ

ಕೆಲಸದ ಸ್ಥಳ: ಕರ್ನಾಟಕ

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಈ ಕೂಡಲೇ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ

Educational Qualification:

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಅಥವಾ ತತ್ಸಮಾನದ ವಿದ್ಯಾರ್ಹತೆಯನ್ನು ಮುಗಿಸಿರಬೇಕು.

ಗರಿಷ್ಟ ಪ್ರಯತ್ನದ ಮಿತಿಗಳ ಕುರಿತಾದ ವಿವರಗಳು :

ಸಾಮಾನ್ಯ ಅರ್ಹತಾ ಅಭ್ಯರ್ಥಿಗಳು: ಗರಿಷ್ಟ 5 ಬಾರಿ ಪ್ರಯತ್ನಿಸಬಹುದು,

2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು : ಗರಿಷ್ಟ 07 ಬಾರಿ ಪ್ರಯತ್ನಿಸಬಹುದು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳು : ಪ್ರಯತ್ನಗಳ ಮಿತಿ ಇರುವುದಿಲ್ಲ.

ಅರ್ಜಿ ಶುಲ್ಕ / Application Fees:

ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ : ರೂ. 600/-

ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ರೂ. 300/-

ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 50/-

ಪ.ಜಾ ಅಥವಾ ಪಪಂ ಅಥವಾ ಪ್ರವರ್ಗ 1 ಅಥವಾ ಅಂಗವಿಕಲ: ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ/ Age Limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗೆ ಕನಿಷ್ಟ 18 ವರ್ಷಗಳು ಪೂರೈಸಿರಬೇಕು ಮತ್ತು ಗರಿಷ್ಟ 35 ವರ್ಷ ಮೀರಿರಬಾರದು.

ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಮಾಜಿ ಸೈನಿಕರಿಗೆ: 05 ವರ್ಷ

ಅಭ್ಯರ್ಥಿಗಳ ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಕೆಳಗಿನ ಹಂತಗಳನ್ನು ನಡೆಸಲಾಗುತ್ತದೆ.

  • ಹಂತ 1: ಪೂರ್ವಭಾವಿ ಪರೀಕ್ಷೆ
  • ಹಂತ 2: ಮುಖ್ಯ ಪರೀಕ್ಷೆ
  • ಹಂತ 3: ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಈ ನೇಮಕಾತಿಗಾಗಿ ಅಭ್ಯರ್ಥಿಗಳು ಆನ್‌ಲೈನ್ನಲ್ಲಿ ಅರ್ಜಿಗಳನ್ನು ನಿಗದಿಪಡಿಸಿದ ದಿನಾಂಕಗಳಂದು ಸಲ್ಲಿಸಬಹುದಾಗಿರುತ್ತದೆ. ಮತ್ತು ಹೆಚ್ಚಿನ ಮಾಹಿತಿಗಳು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ಆದ www.kpsc.kar.nic.in ನಲ್ಲಿ ಲಭ್ಯವಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ. ಮತ್ತು ಆನ್‌ಲೈನ್ ಮೂಲಕ ಅರ್ಜಿಗಳನ್ನೂ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.

Leave a Comment