ಬಿಪಿಎಲ್‌ ಕಾರ್ಡ್‌ ಅರ್ಜಿ ಸದ್ಯಕ್ಕಿಲ್ಲ , ಆರೋಗ್ಯ ಸಮಸ್ಯೆಯುಳ್ಳವರಿಗೆ ಮಾತ್ರ ಕಾರ್ಡ್

ಬಿಪಿಎಲ್‌ ಕಾರ್ಡ್‌ ಅರ್ಜಿ ಸದ್ಯಕ್ಕಿಲ್ಲ , ಆರೋಗ್ಯ ಸಮಸ್ಯೆಯುಳ್ಳವರಿಗೆ ಮಾತ್ರ ಕಾರ್ಡ್
Telegram Group Join Now
WhatsApp Follow Join Now

ಬಿಪಿಎಲ್‌ ಕಾರ್ಡ್‌ ಅರ್ಜಿ ಆರೋಗ್ಯ ಸಮಸ್ಯೆಯುಳ್ಳವರಿಗೆ ಮಾತ್ರ ಕಾರ್ಡ್

ನಮಸ್ಕಾರ ಸ್ನೇಹಿತರೇ ನಿಮಗೆ publicschemes.com ವೆಬ್ಸೈಟ್ಗೆ ಸ್ವಾಗತ, ತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಆನ್‌ಲೈನ್ ಪೋರ್ಟಲ್ ಅನ್ನು ಎರಡು ವರ್ಷಗಳಿಂದಲೂ ಪುನರಾರಂಭಿಸಿಲ್ಲ. ಹೊಸ ಅರ್ಜಿಗೂ ಇನ್ನು ಅವಕಾಶ ಇಲ್ಲ! ರಾಜ್ಯಾದ್ಯಂತ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಸುಮಾರು 2.94 ಲಕ್ಷ ಮಂದಿ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಆದರೆ ಹೊಸ ಅರ್ಜಿದಾರರರಿಗೆ ಅವಕಾಶವಿಲ್ಲಎನ್ನುತ್ತಿದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ಸ್ಥಗಿತಗೊಳಿಸಿದ್ದ ಪೋರ್ಟಲ್ ಅನ್ನು ಈವರೆಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮುಕ್ತಗೊಳಿಸಿಲ್ಲ. ಆದರೆ, ಆರೋಗ್ಯ ತುರ್ತು ಇರುವವರಿಗೆ ಹಾಗೂ ಕಾರ್ಮಿಕರಿಗೆ ಮಾತ್ರ ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ಹೀಗೆ ಬಂದ ಅರ್ಜಿಗಳನ್ನು ಆಯಾ ಜಿಲ್ಲೆಗಳ ಉಪನಿರ್ದೇಶಕರ ಶಿಫಾರಸಿನ ಮೇರೆಗೆ ಆಹಾರ ಇಲಾಖೆಯ ಆಯುಕ್ತರು ಅನುಮೋದನೆ ನೀಡಲಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿಗಳ ಲಾಭ ಪಡೆಯಲು ಸಾಕಷ್ಟು ಮಂದಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆಯಲು ಮುಂದಾಗುತ್ತಾರೆ ಎಂಬ ಕಾರಣದಿಂದ ಆನ್‌ ಲೈನ್ ಪಡಿತರ ಚೀಟಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳನ್ನು

ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಸದ್ಯ ಈ ಹಿಂದೆ ಅರ್ಜಿ ಸಲ್ಲಿಸಲು ಯಾವ ನಿದುಮಗಳು ಜಾರಿಯಲ್ಲಿದ್ದವೋ ಅದೇ ನಿದುಮಗಳನ್ನು ಅನುಸರಿಸಲಾಗುವುದು. ಒಂದು ವೇಳೆ ಹೊಸದಾಗಿ ಮಾರ್ಗಸೂಚಿ ಬಂದರೆ, ಸರಕಾರದ ಸೂಚನೆ ಮೇರೆಗೆ ಅವುಗಳನ್ನು ಅಳವಡಿಸಲಾಗುವುದು ಎಂಬುದು ರಾಜ್ಯ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಅಭಿಮತ.

2.94 ಲಕ್ಷ ಅರ್ಜಿದಾರರಿಗೆ ಕಾರ್ಡ್

ಬರಬೇಕು: ಚುನಾವಣೆ ನೀತಿ ಸಂಹಿತೆಗೂ ಮೊದಲು, ಅಂದರೆ 2022-23ರಲ್ಲಿ ಬಿಪಿಎಲ್ ಕಾರ್ಡ್‌ಗಾಗಿ 2.94 ಲಕ್ಷ ಅರ್ಜಿಗಳು ಬಂದಿವೆ. ಇವುಗಳ ಪರಿಶೀಲನೆ ನಡೆಯುತ್ತಿದೆ. ಕಾರು, ಸ್ವಂತ ಮನೆ, ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ, ಅರ್ಹರಿಗೆ ಕಾರ್ಡ್ ಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಸದ್ಯ ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ಗಳೂ ಸೇರಿ 1.28 ಕೋಟಿ ಕಾರ್ಡ್ಗಳಿವೆ. 4.42 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ.

ಹೊಸ ಕಾರ್ಡ್ ಇಲ್ಲ :

ಸದ್ಯ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ನೀಡುವುದಿಲ್ಲ. ಆದರೆ, ಆರೋಗ್ಯ ಸಮಸ್ಯೆಯುಳ್ಳವರಿಗೆ ಮಾತ್ರ ಅಗತ್ಯತೆ ಪರಿಶೀಲಿಸಿ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸರಕಾರಿ ನೌಕರರಿಗೆ ಇಂದಿನಿಂದ ಯುಪಿಎಸ್ UPS for central government employees from today

ಕೇಂದ್ರ ಸರಕಾರಿ ನೌಕರರಿಗೆ ಇಂದಿನಿಂದ ಯುಪಿಎಸ್ UPS for central government employees from today
Telegram Group Join Now
WhatsApp Follow Join Now

UPS for central government employees from today

ಕೇಂದ್ರ ಸರಕಾರಿ ನೌಕರರಿಗಾಗಿ ರೂಪಿಸಲಾಗಿರುವ ಏಕೀಕೃತ ಪಿಂಚಣಿ ವ್ಯವಸ್ಥೆ(ಯುಪಿಎಸ್) ಮಂಗಳವಾರ (ಏ.1)ದಿಂದ ಜಾರಿಗೆ ಬರುತ್ತಿದೆ. ಯೋಜನೆ ಅನ್ವಯ ನೌಕರರಿಗೆ ಮಾಸಿಕ ಪಿಂಚಣಿ ಸೇರಿ ಹಲವು ಸೌಕರ್ಯಗಳು ದೊರೆಯಲಿವೆ. ಯುಪಿಎಸ್ ಯೋಜನೆಗೆ ಯಾರು ಅರ್ಹರು? ಯಾವೆಲ್ಲ ಸೌಲಭ್ಯಗಳು ಸಿಗಲಿವೆ? ನಿಯಮಗಳು ಏನೇನು?

ಯುಪಿಎಸ್‌ಗೆ ಯಾರು ಅರ್ಹರು?

  • ಈಗಾಗಲೇ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ವ್ಯಾಪ್ತಿಗೆ ಬರುವವರಿಗೆ ಯುಪಿಎಸ್ ಅನ್ವಯ
  • 25 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದವರಿಗೆ ನಿವೃತ್ತಿ ಬಳಿಕ ಮೂಲ ವೇತನದ ಶೇ.50ರಷ್ಟು ಮೊತ್ತವನ್ನು ಪಿಂಚಣಿ ನೀಡಲಾಗುತ್ತದೆ
  • 10 ವರ್ಷ ಸೇವೆ ಸಲ್ಲಿಸಿದವರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ಸಿಗಲಿದೆ
  • 10 ವರ್ಷಗಳಿಗಿಂತ ಮೊದಲು ರಾಜೀನಾಮೆ ನೀಡಿದವರು, ಕೆಲಸದಿಂದ ವಜಾಗೊಂಡವರಿಗೆ ಪಿಂಚಣಿ ಸಿಗಲ್ಲ
  • 2025ರ ಮಾರ್ಚ್ 31 ಅಥವಾ ನಂತರ ಕೆಲಸಕ್ಕೆ ಸೇರಿದವರು 30 ದಿನಗಳೊಳಗೆ ಯುಪಿಎಸ್ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯ

ಕೇಂದ್ರ ಸರಕಾರಿ ನೌಕರರಿಗೆ ಇಂದಿನಿಂದ ಯುಪಿಎಸ್

ಗ್ರಾಚುಟಿಯೂ ಇದೆ

ಸರಕಾರಿ ನೌಕರರಿಗೆ ಎರಡು ರೀತಿಯಲ್ಲಿ ಗ್ರಾಚುಟಿ

ನೀಡಲಾಗುತ್ತದೆ. ಮೊದಲನೆಯದಾಗಿ, ಕನಿಷ್ಠ ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದುವ ನೌಕರರಿಗೆ ರಿಟೈ‌ರ್ ಮೆಂಟ್ ಗ್ರಾಚುಟಿ ನೀಡಲಾಗುತ್ತದೆ. ಸೇವಾ ನಿವೃತ್ತಿಯ ನಂತರವೂ ಗ್ರಾಚುಟಿ ಸಿಗುತ್ತದೆ. ಇದರ ಮೊತ್ತ 25 ಲಕ್ಷ ರೂ. ದಾಟಬಾರದು ಎಂಬ ನಿಯಮವಿದೆ. ಇನ್ನು, ನೌಕರನು ಅಕಾಲಿಕವಾಗಿ ಮೃತಪಟ್ಟರೆ, ಆತ ಸಲ್ಲಿಸಿದ ಸೇವೆಯ ವರ್ಷಗಳ ಆಧಾರದ ಮೇಲೆ ಕುಟುಂಬಸ್ಥರಿಗೆ ಗ್ರಾಚುಟಿ ನೀಡಲಾಗುತ್ತದೆ. ಇದಕ್ಕೆ ಡೆತ್ ಗ್ರಾಚುಟಿ ಎಂದು ಕರೆಯಲಾಗುತ್ತದೆ.

23 ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಯುಪಿಎಸ್, ಯೋಜನೆಯಿಂದ ಅನುಕೂಲ
50ಲಕ್ಷ ಹಾಲಿ ಇರುವ ಕೇಂದ್ರ ಸರಕಾರಿ ನೌಕರರ ಸಂಖ್ಯೆ

ಯುಪಿಎಸ್‌ಗೆ ಜಮೆ ಆಗುವ ಮೊತ್ತ?

ನೌಕರರ ಮಾಸಿಕ ಮೂಲವೇತನ

ಹಾಗೂ ತುಟ್ಟಿಭತ್ಯೆಯ (ಡಿಎ) ಶೇ.10ರಷ್ಟು ಭಾಗವನ್ನು ಯುಪಿಎಸ್ ಯೋಜನೆಗೆ ನೀಡಬೇಕು. ಕೇಂದ್ರ ಸರಕಾರವು ಮೂಲವೇತನ ಮತ್ತು ತುಟ್ಟಿಭತ್ಯೆಯ ಶೇ.18ರಷ್ಟು ಭಾಗವನ್ನು ಯುಪಿಎಸ್‌ಗೆ ಕೊಡುಗೆ ನೀಡುತ್ತದೆ. ನಿವೃತ್ತಿಯ ಬಳಿಕ ಒಂದು ವರ್ಷದ ಮೂಲವೇತನದ ಸರಾಸರಿ ಶೇ.50ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.

ಇಂದಿನಿಂದ ಯಾವೆಲ್ಲ ಹಣಕಾಸು ನಿಯಮ ಬದಲು?

ಮಂಗಳವಾರದಿಂದ ಆರಂಭವಾಗುವ 2025-26ರ ಹಣಕಾಸು ವರ್ಷದಿಂದ ಆರ್ಥಿಕ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿವೆ.

  • 12 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿ, ಉದ್ಯೋಗಿಗಳಿಗೆ ಒಟ್ಟು 12.75 ಲಕ್ಷ ರೂ.ವರೆಗೆ ತೆರಿಗೆ ಇಲ್ಲ
  • ನಿಷ್ಕ್ರಿಯಗೊಂಡಿರುವ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆದ ಯುಪಿಐ ಐಡಿ ರದ್ದು
  • ಎಸ್‌ಬಿಐ, ಪಿಎನ್‌ಬಿ, ಕೆನರಾ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರದಿದ್ದರೆ ದಂಡ
  • ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡದವರಿಗೆ ಹೂಡಿಕೆಯ ಡಿವಿಡೆಂಡ್ ಸಿಗುವುದಿಲ್ಲ
  • ಮ್ಯೂಚುವಲ್ ಫಂಡ್, ಡಿಮ್ಯಾಟ್ ಖಾತೆದಾರರಿಗೆ ಕೆವೈಸಿ ಕಡ್ಡಾಯ
  • ಹಿರಿಯ ನಾಗರಿಕರಿಗೆ ಬಡ್ಡಿಯಿಂದ ಲಭಿಸುವ 1 ಲಕ್ಷ ರೂ. ವರೆಗಿನ ಆದಾಯಕ್ಕೆ ಟಿಡಿಎಸ್‌ (ಮೂಲದಲ್ಲಿ ತೆರಿಗೆ ಕಡಿತ) ಇಲ್ಲ. ಮೊದಲು 50 ಸಾವಿರ ರೂ. ಇತ್ತು.
  • ವಿದೇಶ ಪ್ರವಾಸದ ವೇಳೆ 10 ಲಕ್ಷ ರೂ.ವರೆಗಿನ ಖರ್ಚಿಗೆ ಟಿಸಿಎಸ್ (ಮೂಲದಲ್ಲಿ ತೆರಿಗೆ ಸಂಗ್ರಹ) ಅನ್ವಯ ಆಗಲ್ಲ

ಕೃಪೆ: ವಿಜಯ ಕರ್ನಾಟಕ ಪತ್ರಿಕೆ