India Post GDS Recruitment 2026: Apply Online 25,000+ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

India Post GDS Recruitment 2026: Apply Online

ಭಾರತೀಯ ಅಂಚೆ ಇಲಾಖೆಯಲ್ಲಿ (Department of Posts – India Post) ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬ ಕನಸು ಕಾಣುತ್ತಿರುವ ಹತ್ತನೇ ತರಗತಿ ಮುಗಿಸಿದ ಲಕ್ಷಾಂತರ ಯುವ ಜನತೆಗೆ ಮತ್ತೊಮ್ಮೆ ಸುವರ್ಣಾವಕಾಶ ದೊರೆತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಅಂಚೆ ಇಲಾಖೆಯು ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 25,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (Gramin Dak Sevak – GDS) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು (Schedule-II, July-2026) ಪ್ರಕಟಿಸಿದೆ.

​India Post GDS Recruitment 2026: Apply Online ಯಾವುದೇ ರೀತಿಯ ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸಂದರ್ಶನಗಳ ಟೆನ್ಷನ್ ಇಲ್ಲದೆ, ಕೇವಲ ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ನೇರವಾಗಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದೊಂದು ಅತ್ಯುತ್ತಮ ಸದಾವಕಾಶವಾಗಿದೆ. ನೀವು ನಿಮ್ಮ ಸ್ವಂತ ಊರಿನಲ್ಲಿ ಅಥವಾ ಹತ್ತಿರದ ಅಂಚೆ ಕಚೇರಿಯಲ್ಲಿ ಕೆಲಸ ಮಾಡಲು ಬಯಸಿದರೆ ಈ ಲೇಖನವನ್ನು ಕೊನೆಯವರೆಗೆ ಓದಿ. ಇಲ್ಲಿ ಈ ನೇಮಕಾತಿಗೆ ಸಂಬಂಧಿಸಿದ ವಯೋಮಿತಿ, ಶೈಕ್ಷಣಿಕ ಅರ್ಹತೆ, ಆನ್‌ಲೈನ್ ಅರ್ಜಿ ಸಲ್ಲಿಕೆ ವಿಧಾನ, ವೇತನ ಶ್ರೇಣಿ ಹಾಗೂ ಪ್ರಮುಖ ದಿನಾಂಕಗಳ ಕುರಿತು ಸಮಗ್ರವಾದ ಮಾಹಿತಿ ನೀಡಲಾಗಿದೆ.

India Post GDS Recruitment 2026: Apply Online ಪ್ರಮುಖ ಮಾಹಿತಿಯ ಒಂದು ನೋಟ

 * ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಇಲಾಖೆ (Department of Posts)

 * ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕ್ (BPM, ABPM, ಹಾಗೂ Dak Sevak)

 * ಒಟ್ಟು ಹುದ್ದೆಗಳು: 25,000 ಕ್ಕೂ ಹೆಚ್ಚು (ರಾಜ್ಯ ಹಾಗೂ ವಿಭಾಗವಾರು ವಿವರ ಅಧಿಕೃತ ವೆಬ್‌ಸೈಟ್‌ನಲ್ಲಿದೆ)

 * ಉದ್ಯೋಗ ಸ್ಥಳ: ಅಖಿಲ ಭಾರತ ಮಟ್ಟದಲ್ಲಿ (ನಿಮ್ಮ ಸ್ವಂತ ಊರು ಅಥವಾ ಹತ್ತಿರದ ವಿಭಾಗಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ)

 * ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ (Online) ಮಾತ್ರ

ಮಾಸಿಕ ವೇತನ / ಭತ್ಯೆ (TRCA Details)

India Post GDS Recruitment 2026: Apply Online

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ತವ್ಯದ ಅವಧಿಗೆ ತಕ್ಕಂತೆ ಮಾಸಿಕ ಭತ್ಯೆ ನೀಡಲಾಗುತ್ತದೆ:

 * ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM): ರೂ. 12,000 ದಿಂದ ರೂ. 29,380/- ವರೆಗೆ.

 * ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM) / ಡಾಕ್ ಸೇವಕ್: ರೂ. 10,000 ದಿಂದ ರೂ. 24,470/- ವರೆಗೆ.

ಶೈಕ್ಷಣಿಕ ಅರ್ಹತೆ ಮತ್ತು ಇತರ ನಿಯಮಗಳು

 * ಮೂಲ ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಿಯಿಂದ 10ನೇ ತರಗತಿ (SSLC) ತೇರ್ಗಡೆ ಹೊಂದಿರಬೇಕು. ಇದರಲ್ಲಿ ಗಣಿತ (Mathematics) ಮತ್ತು ಇಂಗ್ಲಿಷ್ (English) ವಿಷಯಗಳಲ್ಲಿ ಕಡ್ಡಾಯವಾಗಿ ಪಾಸ್ ಆಗಿರಬೇಕು.

 * ಸ್ಥಳೀಯ ಭಾಷೆ: ನೀವು ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತೀರೋ, ಆ ರಾಜ್ಯದ ಸ್ಥಳೀಯ ಭಾಷೆಯನ್ನು (ಉದಾಹರಣೆಗೆ ಕರ್ನಾಟಕಕ್ಕೆ ‘ಕನ್ನಡ’) 10ನೇ ತರಗತಿವರೆಗೆ ಒಂದು ವಿಷಯವಾಗಿ ಓದಿರಬೇಕು.

 * ಇತರೆ ಕೌಶಲ್ಯಗಳು: ಮೂಲಭೂತ ಕಂಪ್ಯೂಟರ್ ಜ್ಞಾನ ಹಾಗೂ ಸೈಕಲ್ ತುಳಿಯುವುದು (Cycling) ಕಡ್ಡಾಯವಾಗಿ ತಿಳಿದಿರಬೇಕು.

ವಯೋಮಿತಿ ಮತ್ತು ಸಡಿಲಿಕೆ India Post GDS Recruitment 2026: Apply Online

* ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು.

 * ವರ್ಗಾವಾರು ವಯೋಮಿತಿ ಸಡಿಲಿಕೆ:

   * OBC ಅಭ್ಯರ್ಥಿಗಳಿಗೆ: 3 ವರ್ಷಗಳು

   * SC / ST ಅಭ್ಯರ್ಥಿಗಳಿಗೆ: 5 ವರ್ಷಗಳು

   * ಚೇತನ / PwBD ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ( India Post GDS Recruitment 2026: Apply Online)

 ಸಾಮಾನ್ಯ (UR), OBC ಹಾಗೂ EWS (ಪುರುಷ) ಅಭ್ಯರ್ಥಿಗಳಿಗೆ: ರೂ. 100/- ಮಾತ್ರ.

 * ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ, SC/ST, PwBD ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿರುವುದಿಲ್ಲ (ಉಚಿತ).

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)

ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ (Written Exam) ಅಥವಾ ನೇರ ಸಂದರ್ಶನ (Interview) ಇರುವುದಿಲ್ಲ. ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿ ಕೆಳಗಿನ ಹಂತಗಳಲ್ಲಿ ನಡೆಯುತ್ತದೆ:

​ಮೆರಿಟ್ ಪಟ್ಟಿ ಸಿದ್ಧತೆ (System Generated Merit List): ಅಭ್ಯರ್ಥಿಗಳು 10ನೇ ತರಗತಿಯ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಶೇಕಡಾವಾರು (Percentage) ಆಧಾರದ ಮೇಲೆ ಕಂಪ್ಯೂಟರ್ ಸಿಸ್ಟಮ್ ಮೂಲಕ ಸ್ವಯಂಚಾಲಿತವಾಗಿ ಮೆರಿಟ್ ಪಟ್ಟಿ ತಯಾರಾಗುತ್ತದೆ.

​ದಾಖಲೆಗಳ ಪರಿಶೀಲನೆ (Document Verification): ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ನಂತರ ಅವರು ಹತ್ತಿರದ ವಿಭಾಗೀಯ ಕಚೇರಿಗೆ ತೆರಳಿ ಮೂಲ ದಾಖಲೆಗಳನ್ನು (Original Documents) ಪರಿಶೀಲನೆಗೆ ಒಪ್ಪಿಸಬೇಕು.

​ವೈದ್ಯಕೀಯ ಫಿಟ್‌ನೆಸ್ ಹಾಗೂ ನೇಮಕಾತಿ: ದಾಖಲೆಗಳ ಪರಿಶೀಲನೆ ಯಶಸ್ವಿಯಾದ ಬಳಿಕ ಸರ್ಕಾರಿ ಆಸ್ಪತ್ರೆಯಿಂದ ಮೆಡಿಕಲ್ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆದು ಸಲ್ಲಿಸಿದ ನಂತರ ಅಧಿಕೃತ ನೇಮಕಾತಿ ಆದೇಶವನ್ನು ನೀಡಲಾಗುತ್ತದೆ.

ಈ ಹುದ್ದೆಗಳಿಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. India Post GDS Recruitment 2026: Apply Online

 * ಮೆರಿಟ್ ಪಟ್ಟಿ: ಅಭ್ಯರ್ಥಿಗಳು 10ನೇ ತರಗತಿಯಲ್ಲಿ (SSLC) ಗಳಿಸಿದ ಅಂಕಗಳ ಆಧಾರದ ಮೇಲೆ ಸಿಸ್ಟಮ್-ಜನರೇಟೆಡ್ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

 * ದಾಖಲೆ ಪರಿಶೀಲನೆ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಒರಿಜಿನಲ್ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ.

 ಪ್ರಮುಖ ದಿನಾಂಕಗಳು

  •  ಆನ್‌ಲೈನ್ ಒನ್-ಟೈಮ್ ರಿಜಿಸ್ಟ್ರೇಷನ್ (OTR) ಆರಂಭ: 31 ಆಗಸ್ಟ್ 2026
  •  ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 02 ಸೆಪ್ಟೆಂಬರ್ 2026
  •  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಸೆಪ್ಟೆಂಬರ್ 2026 (ಸಂಜೆ 05:00 ಗಂಟೆಯವರೆಗೆ)
  •  ಅರ್ಜಿ ತಿದ್ದುಪಡಿ ಮಾಡಲು ಅವಕಾಶ (Edit Window): 23 ಸೆಪ್ಟೆಂಬರ್ 2026 ರಿಂದ 24 ಸೆಪ್ಟೆಂಬರ್ 2026

ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

  1.  ಇಂಡಿಯಾ ಪೋಸ್ಟ್ ಜಿಡಿಎಸ್ ಅಧಿಕೃತ ವೆಬ್‌ಸೈಟ್ indiapost.gov.in ಅಥವಾ indiaspostgdsonline.gov.in ಗೆ ಭೇಟಿ ನೀಡಿ.
  2.  ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಬಳಸಿ ಮೊದಲು ‘One Time Registration’ (OTR) ಪೂರ್ಣಗೊಳಿಸಿ.
  3.  ದೊರೆತ ರಿಜಿಸ್ಟ್ರೇಷನ್ ನಂಬರ್ ಬಳಸಿ ಲಾಗಿನ್ ಆಗಿ, ನಿಮ್ಮ 10ನೇ ತರಗತಿ ಅಂಕಗಳು ಹಾಗೂ ಇಷ್ಟವಾದ ವಿಭಾಗವನ್ನು (Division) ಆಯ್ಕೆ ಮಾಡಿ.
  4.  ನಿಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಸಹಿಯನ್ನು (ಗರಿಷ್ಠ 100 KB) ಅಪ್‌ಲೋಡ್ ಮಾಡಿ.
  5.  ನಿಮ್ಮ ವರ್ಗಕ್ಕೆ ತಕ್ಕಂತೆ ಶುಲ್ಕ ಪಾವತಿಸಿ, ಅರ್ಜಿಯನ್ನು ಅಂತಿಮವಾಗಿ Submit ಮಾಡಿ. ಭವಿಷ್ಯದ ಬಳಕೆಗೆ ಪ್ರಿಂಟ್ ತೆಗೆದುಕೊಳ್ಳಿ.

ಗಮನಿಸಿ: ಕೊನೆಯ ಕ್ಷಣದಲ್ಲಿ ವೆಬ್‌ಸೈಟ್ ಸರ್ವರ್‌ನಲ್ಲಿ ದಟ್ಟಣೆ (Server Traffic) ಉಂಟಾಗುವ ಸಾಧ್ಯತೆ ಇರುವುದರಿಂದ, ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಒಳ್ಳೆಯದು.

ಪ್ರಮುಖ ಸಲಹೆಗಳು ಮತ್ತು ಎಚ್ಚರಿಕೆಗಳು


ಕೊನೆಯ ಕ್ಷಣದವರೆಗೆ ಕಾಯಬೇಡಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 21, 2026 ಆಗಿದ್ದರೂ, ಕೊನೆಯ ದಿನಗಳಲ್ಲಿ ವೆಬ್‌ಸೈಟ್ ಸರ್ವರ್‌ನಲ್ಲಿ ಭಾರೀ ದಟ್ಟಣೆ (Server Traffic) ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

​ಮಾಹಿತಿಯ ನಿಖರತೆ: 10ನೇ ತರಗತಿ ಅಂಕಪತ್ರದಲ್ಲಿ (SSLC Marks Card) ಇರುವ ಹೆಸರಿನ ಸ್ಪೆಲ್ಲಿಂಗ್, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳೇ ಆನ್‌ಲೈನ್ ಅರ್ಜಿಯಲ್ಲೂ ನಿಖರವಾಗಿರುವಂತೆ ನೋಡಿಕೊಳ್ಳಿ. ಸಣ್ಣಪುಟ್ಟ ತಪ್ಪುಗಳಾದರೂ ಮೆರಿಟ್ ಹಂತದಲ್ಲಿ ಅಥವಾ ಡಾಕ್ಯುಮೆಂಟ್ ವೆರಿಫಿಕೇಶನ್ ಸಮಯದಲ್ಲಿ ಸಮಸ್ಯೆ ಎದುರಾಗಬಹುದು.

​ಸ್ಥಳೀಯ ಭಾಷಾ ಸ್ಪಷ್ಟತೆ: ನೀವು ಅರ್ಜಿ ಸಲ್ಲಿಸುವ ವಿಭಾಗದ ಸ್ಥಳೀಯ ಭಾಷೆಯನ್ನು ಎಸ್ಸೆಸ್ಸೆಲ್ಸಿಯಲ್ಲಿ ಓದಿರುವುದು ಕಡ್ಡಾಯವಾಗಿದ್ದು, ಕೌನ್ಸಿಲಿಂಗ್ ವೇಳೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತದೆ.

About The Author